Friday, June 22, 2012

ಲಹರಿ

  
ಲಹರಿ
- ಎಸ್.ಎನ್.ಸೇತುರಾಂ


Globalization

Africa ದ ಮೂಲೆಯ ಯಾವುದೋ ಹಳ್ಳಿ ಸೌತೆಕಾಯಿ ...ಕಿತ್ತು ೨೪ ಘಂಟೇಲಿ M.G. Road mall ಲ್ಲಿ ಸಿಗತ್ತೆ
Saudi Arabia ದ ಮರಳುಗಾಡಿನ ಎಣ್ಣೆ ...ತೆಗೆದ ಎರಡೇ ದಿನದಲ್ಲಿ,Commercial Street Bunk ಅಲ್ಲಿ ಸುರಿಯತ್ತೆ
ಇಲ್ಲಿಯ ಗೋಧಿ ಮಾವು ಅಲ್ಲಿ ಪ್ರಸಿದ್ದ ....ಅಲ್ಲಿಯ ಕೋಳಿ ಕೊಬ್ಬು ,ಇಲ್ಲಿ ಬೇಕಂದರಲ್ಲಿ ಸಿಗತ್ತೆ ......
ಇಲ್ಲೀ ಆವಿಷ್ಕಾರಗಳನ್ನ ಕ್ಷಣದಲ್ಲಿ ಅಲ್ಲಿಗೆ ಕಳಿಸಿ ..,ಅಲ್ಲಿ assemble ಆದದ್ದರ ಸುಖ ಇಲ್ಲಿ ಪಡೀತೀವಿ...

***** ***** ***** *****

ಅಪ್ಪ ಮೂಲೇಲಿ ಗುಣಿ ಗುಣಿಸುವ ಮಂತ್ರ ..ಮಣ ಮಣ ಅಂತಂದ ಆಶೀರ್ವಾದ ಕ್ಷಣದಲ್ಲಿ, via satellite ಅಲ್ಲಿ ಮಗ ಸೊಸೇನ ಮುಟ್ಟತ್ತೆ..
ಅವರಲ್ಲಿ ನಮಸ್ಕಾರ ಮಾಡ್ತಾರೆ ,....ಇವರಿಲ್ಲಿ ಆಶೀರ್ವಾದ ಮಾಡ್ತಾರೆ,..ಮಧ್ಯೆ 20,000 ಕಿ.ಮೀ.,..ಎಲ್ರಿಗೂ ಎಲ್ಲ ಸ್ಪಷ್ಟವಾಗಿ ಕಾಣಿಸತ್ತೆ..

***** ***** ***** *****

ಮಗ ಸೊಸೆ ಇಬ್ರೂ Busy,...ಪುರುಸೊತ್ತಿಲ್ಲ,..Dollar ಗೆ 56 ರೂಪಾಯಿ .....
ಮಕ್ಕಳಾಗದಿದ್ರೆ ಅಪ್ಪನಿಗೆ ...., ಮುಕ್ತಿ ಇಲ್ಲ.....ಅನಾಮಿಕ ..... ಸಮಸ್ಯೆ.... ,...
ಪ್ರತಿಷ್ಟಿತ sperm bank ಸಹಕಾರದಲ್ಲಿ ,ಅದ್ಯಾರೋ Italian ಬಾಡಿಗೆ ತಾಯಿ
ನನ್ನ ಮೊಮ್ಮಗನ್ನ ಹೊತ್ತು ಹೆತ್ಲು.......

***** ***** ***** ****

ಮಗ Phone ಮಾಡಂದ...``ಅಪ್ಪ ನೀನಜ್ಜ ಆದೆ ``,...ನಾನು ಅಪ್ಪಂಗಂದೆ
``ನೀನು ಮುತ್ತಜ್ಜ ಆದೆ , ಕನಕಾಭಿಷೇಕ ಮಾಡ್ತೇನಿ ``...ಮಲಗಿದ ಮೂಲೆಯಿಂದ್ಲೇ ಕೂಗಿದ....
``...."**ಡೇ ಮಗನೇ,..ಪಿಂಡ ಹಾಕ ಬೇಡ,..ಪಾಂಡವರದ್ದು ವಾಸಿ ,..ಯಾರು ಅಂತ ಗೊತ್ತಿತ್ತು
ನಿಮ್ಮದಿನ್ನೂ ಅತ್ತತ್ತಾ ......ಬರೀ ಮಹಾಭಾರತಕ್ಕೆ ಮುಗೀಲಿಲ್ಲ.......ಅವ್ರನ್ನ ಮೀರಿಸ್ತಿದೀರಿ ``.....

***** ***** ***** *****

ಕೋಟ್ಯಂತರ ಆಸ್ತಿ ಇದೆ...Will ಬರೆದಿಟ್ಟಿದ್ದಾರೆ ...
ಕುದುರೆ ತಳಿ ಹೇಳ್ತಾರೆ ,...ನಾಯಿ ತಳಿ ಹೇಳ್ತಾರೆ ,.ಬೆಳೆದ ಬೆಳೆ ತಳಿ ಹೇಳ್ತಾರೆ... ಕ್ರಿಮಿ ಕೀಟಗಳದ್ದು ಹೇಳ್ತಾರೆ
ಸ್ವಂತದ್ದು ಗೊತ್ತಿಲ್ವಂತೆ ....ತಳಿ ಗೊತ್ತಿಲ್ದೊರಿಗೆ ನನ್ನಾಸ್ತೀಲಿ ಪಾಲಿಲ್ಲ ...
ನನ್ನ DNA ಜೋಪಾನವಾಗಿರ್ಲಿ ,....ಅವು match ಆದೋನು ನನ್ನಾಸ್ತಿ ತಿನ್ನಲಿ......

***** ***** ***** *****

ಪೇಪರಲ್ಲಿ ಸುದ್ದಿ ,....N.D. Tiwari 92ನೇ ವಯಸ್ಸಲ್ಲಿ ,Supreme court ಹೇಳ್ತೂ ಅಂತ DNA ಪರೀಕ್ಷೆಗೆ ರಕ್ತ ಕೊಟ್ರಂತೆ
ಪಾಪ!!..ವಯಸ್ನಲ್ಲಿ ಸಂಯಮವಿಲ್ಲದ್ದಕ್ಕೆ ..ವಯಸ್ಸಾದ ಕಾಲದಲ್ಲಿ ರಕ್ತ ಹರಿಸ್ತಿದ್ದಾರೆ ........

***** ***** ***** *****

ದಿನ ನಿತ್ಯ ಹೊಡೆದಾಟ ....ಎಲ್ಲ ಕಡೆ ಮಹಾಭಾರತ ...
ಯಾರದ್ದೋ ಮಗು...ಇನ್ಯಾರೋ ಸಾಕ್ತಾರೆ ....ಯಾರದ್ದೋ ಆಸ್ತಿ ...ಇನ್ಯಾರೋ ತಿಂತಾರೆ

***** ***** ***** *****

ದೇಶದಲ್ಲಿ 90% ಜನ ಅರೆಹೊಟ್ಟೆ ಸಾಯ್ತಾರೆ ......ಇನ್ಹತ್ತು percent ಜನ ಹೆಚ್ಚಾದ cholesterol ಕರಗಿಸೋಕೆ
ಧಭ ಧಭ ದಿಕ್ಕು ದೆಸೆಯಿಲ್ದೆ ನಡೀತಾರೆ!.......

***** ***** ***** *****

ಒಂದು ಜಾಹೀರಾತು : Tractor ಕೊಂಡ್ರೆ Plasma TV free.......
ಉತ್ತ ಮೇಲೆ Plasma TV ನೋಡ್ತಾ ....ಬಿತ್ತೋ ಬೀಜಕ್ಕೆ ಕಾಯಬಹುದು....
ಏನೂ ಇಲ್ಲದಕ್ಕೆ ಇವನು ಬೆತ್ತಲೆ .....
ಅಲ್ಲಿ TV ಯಲ್ಲಿ .....ಎಲ್ಲಾಇದೆ ಅನ್ನೋ ಕಾರಣಕ್ಕೆ ಬೆತ್ತಲೆ .

***** ***** ***** *****

No comments:

Post a Comment