Friday, June 29, 2012

ಗಂಗೆ

ಗಂಗೆ
- ಎಸ್. ಎನ್. ಸೇತುರಾಂ


ಗಂಗೆ !!
ದಂಡೆಯಲಿ ಸಾಧು !
ವಿರಕ್ತ..
ಅರೆಬೆತ್ತಲೆ ಮೈ,
ಬಣ್ಣ ಮಾಸಿದ ತುಂಡು ಕಾವಿ .
ಸ್ನಾನ ಕಾಣದ ಮೈ
ಗಂಟು ಜಟೆ ಕಟ್ಟಿ
ನವೆಗೆ ಬಳಿದ ಬೂಧಿ..
``ಸ್ನಾನ ಮಾಡಬಾರದೆ !
ಹೆಜ್ಜೆ ದೂರ ಹರಿವ ಗಂಗೆ
ಮುಳುಗೇಳಬಾರದೆ ? ``
ಅಂದರದ್ಯಾರೋ .....

ಸಾಧು ನಕ್ಕಂದ !!
``ಜಗದ ಪಾಪ ತೊಳೆವ ಗಂಗೆ
ಮುಳುಗೆದ್ದರೆ , ಮೈ ತಾಕಿದರೆ
ಕಡಿ ಕಜ್ಜಿಯಾದೀತು,!
ನವೆ ನಂಜಾದೀತು !!!!

No comments:

Post a Comment